ಕನ್ನಡ ರಾಜ್ಯೋತ್ಸವ 2023

ದಿನಾಂಕ : 10/11/2023

ಕನ್ನಡ ರಾಜ್ಯೋತ್ಸವ

ಮೈಸೂರಿನ ಪ್ರತಿಷ್ಠಿತ ಗೋಕುಲಂ ಬಡಾವಣೆಯ ಹೃದಯ ಭಾಗದಲ್ಲಿರುವ ಮೈಸೂರ್ ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಲಯನ್ ಧರ್ಮೇಂದ್ರ ಅವರು ಕರ‍್ಯಕ್ರಮದ ಕೇಂದ್ರಬಿAದುವಾಗಿದ್ದರು. ಇವರೊಂದಿಗೆ ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ಶೋಭಾ ಪೆರೆರಾ, ಆಢಳಿತಾಧಿಕಾರಿಯಾದ ಹೆಚ್.ಎಸ್. ತ್ರಿಣೇಶ್ ಅವರು ಉಪಸ್ಥಿತರಿದ್ದರು.

ಶಾಲೆಯ ಗುರುವೃಂದದವರ ಉಡುಗೆ-ತೊಡುಗೆ ಕನ್ನಡ ನುಡಿಹಬ್ಬಕ್ಕೆ ಮೆರುಗನ್ನು ತಂದುಕೊಟ್ಟಿತು. ಶಾಲೆಯ ಮುಂಭಾಗದ ಆವರಣದಲ್ಲಿ ವೇದಿಕೆಯ ಎದುರು ಸಾಲಾಗಿ ಶಿಸ್ತಿನಿಂದ ಕುಳಿತಿದ್ದ ಮಕ್ಕಳೂ, ಗುರುವೃಂದದವರೂ, ಬೋಧಕೇತರ ವರ್ಗದವರೂ ಕರ‍್ಯಕ್ರಮ ವೀಕ್ಷಣೆಗೆ ಉತ್ಸುಕರಾಗಿ ಸ್ವಶಿಸ್ತಿನಿಂದ ನುಡಿಹಬ್ಬದ ಚಾಲನೆಗೆ ಪ್ರೇರಣಾಶಕ್ತಿಯಾಗಿದ್ದರು.

ಬೆಳಗ್ಗೆ 9 ಗಂಟೆಗೆ ಸರಿಯಾಗಿ ಲಯನ್ ಧರ್ಮೇಂದ್ರ ಅವರು ಶಾಲೆಯ ಉಪಪ್ರಾಂಶುಪಾಲರು, ಆಢಳಿತಾಧಿಕಾರಿ ಮತ್ತು ಕನ್ನಡ ಶಿಕ್ಷಕರ ವೃಂದದೊAದಿಗೆ ಸೇರಿ ಜ್ಯೋತಿ ಬೆಳಗಿಸುವುದರ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು. ‘ಕನ್ನಡ ಎನ್ನುವುದು ಕೂಸಲ್ಲ ಅದೊಂದು ಶಕ್ತಿ’ ಎನ್ನುವ ಘೋಷ ವಾಕ್ಯದೊಂದಿಗೆ ಮಕ್ಕಳು ಕನ್ನಡ ಶಿಕ್ಷಕರ ಮಾರ್ಗದರ್ಶನದಡಿ ಕರ‍್ಯಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟರು. ಡಿ.ಎಸ್.ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’ ಈ ಗೀತೆಯು ಮಕ್ಕಳಲ್ಲಿ ಕನ್ನಡ ನಾಡಿನ ಅಭಿಮಾನವನ್ನು ಹೆಚ್ಚಿಸಿತು.

ಮನುಷ್ಯ ಜೀವನದಲ್ಲಿ ವೈಚಾರಿಕತೆಯಿಂದ ಸಾಗಬೇಕು ಎನ್ನುವುದನ್ನು ಮಕ್ಕಳು ಹಾಸ್ಯಾತ್ಮಕ ನಾಟಕದ ಮೂಲಕ ತಿಳಿಸಿಕೊಟ್ಟರು. ಕನ್ನಡ ನಾಡಿನ ಅಭಿಮಾನವನ್ನು ಹೆಚ್ಚಿಸುವ ಹಾಡುಗಳಿಗೆ ಹೆಜ್ಜೆ ಹಾಕಿದ ಮಕ್ಕಳ ನೃತ್ಯ, ಮೈದಾನದ ತುಂಬ ಮಕ್ಕಳ ಕೈಯಲ್ಲಿ ಹಾರಾಡಿದ ಕನ್ನಡ ಭಾವುಟ, ಮಕ್ಕಳ ಉತ್ಸಾಹ, ಚಪ್ಪಾಳೆಗಳೆಲ್ಲ ಕನ್ನಡ ನುಡಿಹಬ್ಬಕ್ಕೆ ಮೆರುಗನ್ನು ನೀಡಿದವು. ಕನ್ನಡದ ಕಂಪು ಎಲ್ಲರ ಮನಗಳಿಗೆ ಸವಿಯನ್ನು ಉಣಬಡಿಸಿದಂತೆ ಕನ್ನಡ ರಾಜ್ಯೋತ್ಸವ ಕರ‍್ಯಕ್ರಮ ಮೂಡಿಬಂತು.